ಬಹುಜನರ ಹಿತಕ್ಕಾಗಿ ಭಗವಾನ್ ಬುದ್ಧರು ಭೋದಿಸಿದ ಧಮ್ಮ ಮತ್ತು ಧ್ಯಾನದ ಅಧ್ಯಯನ ಮತ್ತು ಅಭ್ಯಾಸಕ್ಕೆ ಸಹಾಯಕವಾಗುವಂತೆ ಭಾರತವಲ್ಲದೇ ದೇಶ ವಿದೇಶಗಳಲ್ಲಿ ಮಹಾಭೋಧಿ ಸಂಸ್ಥೆಯ ವಿಭಾಗಗಳನ್ನು ಸ್ಥಾಪಿಸಿರುತ್ತಾರೆ. ಮಹಾಭೋಧಿ ಸಂಸ್ಥೆಯು ಒಂದು ಧಯೆ, ಉದಾರತೆಯ ಸಂಸ್ಥೆಯಾಗಿದ್ದು, ಕರುಣಾಳು ಭಗವಾನ್ ಬುದ್ಧರ ಭೋದನೆಯನ್ನು ಬುದ್ಧರ ಜನ್ಮಭೂಮಿ ಭಾರತದಲ್ಲಿ ಪುನರುಜ್ಜೀವಗೊಳಿಸಲು ಶ್ರಮಿಸುವುದೇ ಈ ಸಂಸ್ಥೆಯ ಮುಖ್ಯ ಧ್ಯೇಯೋದ್ದೇಶವಾಗಿದೆ, ಹಾಗೂ ಭಗವಾನ್ ಬುದ್ಧರ ಅತ್ಯಮೂಲ್ಯ ಧಮ್ಮಭೋಧನೆಯನ್ನು ಪ್ರತಿಯೊಬ್ಬರೂ ಅಭ್ಯಾಸಮಾಡಲು ಅನುವುಮಾಡಿಕೊಡುತ್ತಿರುವುದಲ್ಲದೆ, ಅನೇಕ ಸಮಾಜಮುಖಿ ನಿಸ್ವಾರ್ಥಸೇವೆಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಜಾತಿ, ಮತ, ಧರ್ಮ, ಲಿಂಗಭೇದವಿಲ್ಲದೆ, ದೇಶ, ಭಾಷೆ ಭೇದವಿಲ್ಲದೆ, ಪ್ರತಿಯೊಂದು ಜೀವಿಯ
ಸುಖ, ಸಂತೋಷ, ಕ್ಷೇಮ, ನೆಮ್ಮದಿಗಾಗಿ ಈ ಸಂಸ್ಥೆಯು ತನ್ನನ್ನು ತಾನು ಅರ್ಪಸಿಕೊಂಡಿದೆ. ಆರಂಭದಿಂದಲೂ,
ಈ ಸಂಸ್ಥೆಯು ಅನೇಕ ಲೌಕಿಕ ಮತ್ತು ಅಲೌಕಿಕ ಜ್ಞಾನದ ಪ್ರಚಾರ ಮತ್ತು ಪರೋಪಕಾರಿ ಸೇವಾಮನೋಭಾವದಿಂದ
ಅನೇಕ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ, ಅದರ ಜೊತೆಗೆ ಬಹುಮುಖ್ಯವಾಗಿ ಆಶ್ರಮ
ಜೀವನ ತರಬೇತಿ ಕೇಂದ್ರವಾಗಿಯೂ, ಧಮ್ಮ ಪುಸ್ತಕಗಳ ಪ್ರಕಾಶನ ಕೇಂದ್ರವಾಗಿಯೂ ಚಟುವಟಿಕೆಯಿಂದ
ಕಾಯರ್ೊನ್ಮುಕವಾಗಿದೆ. ಇವೆಲ್ಲವುಗಳ ಜೊತೆಗೆ, ಆಚಾರ್ಯ ಬುದ್ಧರಖ್ಖಿತ ಭಂತೇಜಿಯವರು 'ಭಗವಾನ್
ಬುದ್ಧ, ಪಾಳಿ ಮತ್ತು ತೆರವಾದ ವಿಶ್ವವಿದ್ಯಾಲ' ಯವನ್ನು ಸ್ಥಾಪಿಸಿ, ಅದರ ಮುಖೇನ ಭಗವಾನ್
ಬುದ್ಧರ ಭೋಧನೆಯ ಮೇಲೆ ಸಂಶೋಧನಾತ್ಮಕ ಅಧ್ಯಯನ ಮಾಡಲು ಹಾಗೆಯೇ ಪಾಳಿಭಾಷೆಯಲ್ಲಿರುವ ತ್ರಿಪಿಟಕವನ್ನು
ಅನೇಕ ಭಾಷೆಗಳಿಗೆ ಭಾಷಾಂತರಿಸಿ, ಪ್ರತಿಯೊಬ್ಬರು ಧಮ್ಮಾನುವ ಮತ್ತು ಮನಶ್ಯಾಂತಿಯನ್ನು ಪಡೆಯಲು
ಸಹಕಾರಿಯಾಗಿದೆ.